ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಇದನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ. == ಐತಿಹ್ಯ == ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರು ತಾಯಿ ಶಾರದೆಯನ್ನು ಪ್ರತಿಷ್ಠಾಪಿಸಿ ಮಠವನ್ನು ಸ್ಥಾಪಿಸಲು ಕಾರಣ ಈ ಕಥೆಯಲ್ಲಿದೆ. ಒಮ್ಮೆ ತುಂಗೆಯ ತಟಕ್ಕೆ ಶಂಕರಾಚಾರ್ಯರು ಬಂದಾಗ ಜೋರಾಗಿ ಬಿಸಿಲು ಇತ್ತು. ಆ ಸಂದರ್ಭದಲ್ಲಿ ಹಾವೊಂದು ಹೆಡೆ ಬಿಚ್ಚಿ ಕಪ್ಪೆಯೊಂದಕ್ಕೆ ರಕ್ಷಣೆ ನೀಡುತ್ತಿತ್ತಂತೆ. ಶತ್ರುಗಳು ಮಿತ್ರರಾಗಿ ಸಹಕಾರಕ್ಕೆ ನಿಂತ ಈ ಸ್ಥಳದಲ್ಲಿ ಅಭೂತಪೂರ್ವವಾದ ಶಕ್ತಿ ಇದೆ ಎಂಬುದನ್ನು ಮನಗಂಡ ಆಚಾರ್ಯರು ಈ ಪ್ರದೇಶವನ್ನು ಪವಿತ್ರ ಪುಣ್ಯ ಕ್ಷೇತ್ರ ಮಾಡಿದರೆಂದು ಹೇಳಲಾಗುತ್ತದೆ. == ಪೀಠಾಧಿಪತಿಗಳು == ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು ೩೬ ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಪೀಠಾರೋಹಣದ ರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಹೇಳಿ ೩೭ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮರನ್ನು ಉತ್ತರಾಧಿಕಾರಿಯಾಗಿ ದಿ.4-1-2015 ರಂದು ಘೋಷಿಸಿದರು. == ಶಿಷ್ಯ ಸ್ವೀಕಾರದ ಆರಂಭದ ಕ್ರಿಯೆಗಳು == ದಿ,22-1-2015 ಗುರುವಾರ ಶೃಂಗೇರಿಯಲ್ಲಿನ ದಕ್ಷಿಣಾಮ್ನಾಯ ಶಾರದಾ ಪೀಠಾಧಿಪತಿ ಶಂಕರಾಚಾರ್ಯ ಭಾರತೀತೀರ್ಥ ಶ್ರೀಗಳ ಶಿಷ್ಯ ಸ್ವೀಕಾರ ಸಮಾರಂಭವು ಗುರು­ವಾರ ವಿಧ್ಯುಕ್ತವಾಗಿ ಆರಂಭಗೊಂಡಿತು. ಪೀಠದ ಉತ್ತರಾಧಿಕಾರಿ­ಯಾಗಿ ನೇಮಕಗೊಳ್ಳಲಿರುವ ಬ್ರಹ್ಮ­ಚಾರಿ ಕುಪ್ಪ ವೆಂಕಟೇಶ್ವರ ಪ್ರಸಾದ ಶರ್ಮ ಅವರು ಬೆಳಿಗ್ಗೆ 8 ಗಂಟೆಗೆ ನರಸಿಂಹವನದಲ್ಲಿ ಭಾರತೀತೀರ್ಥರಿಗೆ ಗುರುವಂದನೆ ಸಲ್ಲಿಸಿದರು. ನಂತರ ಶಾರ­ದಾಂಬಾ ದೇವಾಲಯ ಪ್ರವೇಶಿಸಿದರು. ಶಕ್ತಿ ಗಣಪತಿ ಗುಡಿಯಲ್ಲಿ ನಡೆದ ಮಹಾ­ಗಣಪತಿ ಹೋಮದ ಪೂರ್ಣಾ­ಹು­ತಿಯಲ್ಲಿ ಪಾಲ್ಗೊಂಡು, ಶಾರದಾಂಬೆಯ ದರ್ಶನ ಪಡೆದರು. ಬಳಿಕ ಪೀಠದ ಮುಖ್ಯಕಾರ್ಯ­ನಿರ್ವ­ಹಣಾಧಿಕಾರಿ ಮತ್ತು ಆಡಳಿ­ತಾಧಿಕಾರಿ ವಿ.ಆರ್‌.ಗೌರಿಶಂಕರ್‌ ಮತ್ತಿತರ ಹಿರಿಯ ಭಕ್ತಾದಿಗಳ ಜತೆ ದೇವಸ್ಥಾನ, ಹಿಂದಿನ ಅನೇಕ ಸ್ವಾಮೀಜಿಗಳ ವೃಂದಾವನ ಸಂದರ್ಶಿಸಿದರು. ಬಳಿಕ ಕೃಚ್ಛ್ರಾಚರಣೆ ವಿಧಿಯನ್ನು ನೆರವೇರಿಸಿದರು. ವಸ್ತ್ರ, ಹಿರಣ್ಯ, ಧಾನ್ಯ ಮೊದಲಾದುವುಗಳನ್ನು ದಾನ ಮಾಡಿ­ದರು. ದೇವ ಋಣ, ಋಷಿ ಋಣ ಹಾಗೂ ಪಿತೃ ಋಣಗಳಿಂದ ಮುಕ್ತಿ ಪಡೆಯುವ ಸಲುವಾಗಿ ಅಷ್ಟಶ್ರಾದ್ಧ ವಿಧಿಯನ್ನು ನೆರವೇರಿಸಿದರು. ಈ ವಿಧಿಯ ಅಂಗವಾಗಿ 18 ವೈದಿಕರಿಗೆ ದಾನ ನೀಡಿ, ಅವರಿಂದ ಆಶೀರ್ವಾದ ಪಡೆದರು. ಗುರುವಾರ ರಾತ್ರಿ ಇಡೀ ಉಪವಾಸವಿದ್ದು ಜಪ ಹಾಗೂ ಪಾರಾಯಣಗಳೊಂದಿಗೆ ಜಾಗರಣೆ ನಡೆಸಿದರು. ಶುಕ್ರವಾರ ಮುಂಜಾನೆ ಪುರುಷ­ಸೂಕ್ತ ಹೋಮ ಹಾಗೂ ವಿರಾಜ ಹೋಮಗಳನ್ನು ನೆರವೇರಿಸಲಿರುವ ಶರ್ಮ ಅವರು ತುಂಗೆಯ ತೀರದಲ್ಲಿ ಭಾರತೀ ತೀರ್ಥ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಈ ಸಮಾರಂಭವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ವಿಶ್ವದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಶೃಂಗೇರಿಗೆ ಬಂದಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್‌, ಮದ್ರಾಸ್‌ ಹೈಕೋರ್ಟಿನ ನ್ಯಾಯಮೂರ್ತಿ ರಾಮ­ನಾಥನ್‌, ಮುಂತಾದ ಗಣ್ಯರು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.(ಪ್ರಜಾವಾಣಿ ವಾರ್ತೆ-,23/01/2015) === ಶಿಷ್ಯ ಸ್ವೀಕಾರ === ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿ­ಯಾಗಿ ನಿಯುಕ್ತ­ರಾದ ಕುಪ್ಪಾ ವೆಂಕಟೇ­ಶ್ವರ ಪ್ರಸಾದ ಶರ್ಮಾ ಅವರಿಗೆ ಶುಕ್ರ­ವಾರ ಶಿಷ್ಯ ಸ್ವೀಕಾರದ ನಂತರ ಜಗ­ದ್ಗುರು ಭಾರತೀ ತೀರ್ಥರು ‘ವಿಧುಶೇಖರ ಭಾರತಿ’ ಎಂಬ ಯೋಗ ಪಟ್ಟ ನೀಡಿದರು. ದೇಶ ವಿದೇಶಗಳಿಂದ ಶೃಂಗೇರಿಗೆ ಬಂದಿದ್ದ ಸಹಸ್ರಾರು ಭಕ್ತರ ಸಮಕ್ಷಮ­ದಲ್ಲಿ ಬೆಳಿಗ್ಗೆ 7 ಗಂಟೆಗೆ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ ಪುರುಷಸೂಕ್ತ ಹೋಮ, ವೀರಾಜ ಹೋಮಗಳು ನಡೆ­ದವು. ನಂತರ ತುಂಗಾನದಿ­ಯಲ್ಲಿ­ರುವ ಸಂಧ್ಯಾ ಮಂಟಪದ ಬಳಿ ನದಿ ನೀರಿನಲ್ಲಿ ನಿಂತ ವೆಂಕಟೇಶ್ವರ ಪ್ರಸಾದ ಶರ್ಮಾ ಅವರು ಶಿಖಾ, ಯಜ್ಞೋಪವೀತ, ಶ್ವೇತವಸ್ತ್ರ ಪರಿತ್ಯಾಗ ಮಾಡಿದರು. ಜಗದ್ಗುರು ಭಾರತೀ ತೀರ್ಥರು ಶಿಷ್ಯ­ನಿಗೆ ಕಾಷಾಯ ವಸ್ತ್ರ, ದಂಡ, ಕಮಂಡಲ­ಗಳನ್ನು ನೀಡಿ ಆಶೀರ್ವದಿ­ಸಿದರು. ಕಾಷಾಯ ವಸ್ತ್ರಧಾರಿಗಳಾದ ಶ್ರೀದ್ವಯರು ಚಂದ್ರಶೇಖರ ಭಾರತೀ, ಸಚ್ಚಿದಾ­ನಂದ ಶಿವಾನುಭವ ನೃಸಿಂಹ ಭಾರತೀ ಹಾಗೂ ಅಭಿನವ ವಿದ್ಯಾ­ತೀರ್ಥರ ಅಧಿಷ್ಠಾನಗಳಿಗೆ ತೆರಳಿದರು. ಅಲ್ಲಿ ಜಗದ್ಗುರು ಭಾರತೀ ತೀರ್ಥರು ಶಿಷ್ಯನಿಗೆ ಪ್ರಣವೋಪದೇಶ, ಮಹಾ­ವ್ಯಾಕ್ಯೋಪದೇಶ ನೀಡಿದರು. ನಂತರ ತುಂಗಾ­ನದಿಯಲ್ಲಿ ಹಂಸ ಪಕ್ಷಿಯನ್ನು ಹೋಲು­ವಂತೆ ಸಿದ್ಧಪಡಿಸಿದ್ದ ನಾಡ­ದೋಣಿ­­ಯಲ್ಲಿ ವೆಂಕಟೇಶ್ವರ ಪ್ರಸಾದ ಶರ್ಮಾ ಅವರು ನದಿಯನ್ನು ದಾಟಿದ ನಂತರ ಪರ್ಯಂಕ ಶೌಚ ಕಾರ್ಯ ನಡೆಯಿತು. ಶಾರದಾಂಬಾ ದೇವಾಲಯ­ದಲ್ಲಿ­ರುವ ವ್ಯಾಖ್ಯಾನ ಸಿಂಹಾಸನದಲ್ಲಿ ಜಗ­ದ್ಗುರು­ಗಳು ತಮ್ಮ ಶಿಷ್ಯನನ್ನು ಕುಳ್ಳಿರಿಸಿ ಅವರ ತಲೆಯ ಮೇಲೆ ಸಾಲಿಗ್ರಾಮ­ವಿಟ್ಟು ಪೂಜೆ ನೆರವೇರಿಸಿ­ದರು.ಶ್ರೀ ಶಂಕರಾ­ಚಾರ್ಯರು ನೀಡಿರುವ ದಶನಾಮ­ಗಳಲ್ಲಿ (ಭಾರತೀ, ಸರಸ್ವತಿ, ಆಶ್ರಮ, ಗಿರಿ,ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ಹಾಗೂ ವನ) ಒಂದನ್ನು ಆಯ್ಕೆ ಮಾಡಿ ನೂತನ ಶಿಷ್ಯನಿಗೆ ಹಿಂದಿನ ಗುರುಗಳಾದ ಚಂದ್ರಶೇಖರ ಭಾರತೀ ಹಾಗೂ ಅಭಿನವ ವಿದ್ಯಾತೀರ್ಥರ ನಾಮವನ್ನು ಒಳಗೊಂಡ ‘ವಿಧುಶೇಖರ ಭಾರತೀ’ ಎಂಬ ಯೋಗ ಪಟ್ಟವನ್ನು ನೀಡಿ­ದರು. ನೂತನ ಶ್ರೀಗಳು ವ್ಯಾಖ್ಯಾನ ಸಿಂಹಾಸನದಲ್ಲಿ ಜಗದ್ಗುರು ಭಾರತೀ ತೀರ್ಥರನ್ನು ಕುಳ್ಳಿರಿಸಿ ಪಾದಪೂಜೆ ಸಲ್ಲಿಸಿದರು. ನಂತರ ನಡೆದ ಮಹಾಸಭೆಯಲ್ಲಿ ಎಡತೊರೆ, ಶಿವಗಂಗಾ, ಆನೆಗುಂದಿ, ಹೆಬ್ಬೂರು ಮತ್ತು ಧರ್ಮಪುರಿ ಮಠಾಧೀಶರು, ಕೇಂದ್ರ ಸಚಿವ ಅನಂತ­ಕುಮಾರ್‌, ಸೀಮಾಂಧ್ರ ವಿಧಾನಸಭೆ ಸಭಾಪತಿ ಒಡಲ ಶಿವಪ್ರಸಾದ್, ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯ­ಚಂದ್ರ ಜೈನ್, ಸಂಸದರಾದ ಬಿ.ಎಸ್. ಯಡಿ­ಯೂರಪ್ಪ, ಶೋಭಾ ಕರಂದ್ಲಾಜೆ, ಶಾಸಕರಾದ ಡಿ.ಎನ್. ಜೀವರಾಜ್, ವಿಜಯ­ಕುಮಾರ್, ಬಿಸಿಸಿಐ ಅಧ್ಯಕ್ಷ ಸ್ಥಾನ­ದಿಂದ ಅಮಾನತುಗೊಂಡಿರುವ ಎನ್. ಶ್ರೀನಿ­ವಾಸನ್, ಟಾಫೆ ಕಂಪನಿ ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್, ಸಿಂಪ್ಸನ್ ಸಂಸ್ಥೆಯ ಮುಖ್ಯಸ್ಥ ಎ. ಕೃಷ್ಣಮೂರ್ತಿ, ಸ್ಯಾಂಗ್‌ಸುಯಿ ಸಂಸ್ಥೆಯ ಮುಖ್ಯಸ್ಥ ರಾಮಾ ಸುಬ್ರಹ್ಮಣ್ಯ ರಾಜ, ಮದ್ರಾಸ್ ಹೈಕೋರ್ಟ್ ನ್ಯಾಯ­ಮೂರ್ತಿ ರಾಮ­ನಾಥನ್, ಅಮೆರಿಕದ ಅನಿವಾಸಿ ಭಾರತೀಯ ಉದ್ಯಮಿ ಯಜ್ಞ ಸುಬ್ರಹ್ಮಣ್ಯಂ, ಮಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್‌ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9ರಿಂದ ಭಾರತೀ ಬೀದಿಯಲ್ಲಿ ಉಭಯಶ್ರೀಗಳ ಸ್ವರ್ಣ ಹಾಗೂ ಬೆಳ್ಳಿಯ ಪಲ್ಲಕ್ಕಿ ಉತ್ಸವ ನಡೆಯಿತು.(ಪ್ರಜಾವಾಣಿ-೨೪-೧-೨೦೧೫) == ಅವಿಚ್ಛಿನ್ನ ಗುರುಶಿಷ್ಯಪರಂಪರೆ == === ಗುರು ಪರಂಪರೆಯಲ್ಲಿ ದೈವತ್ವದ ಸಮೂಹ === ಸದಾಶಿವ ನಾರಾಯಣ ಬ್ರಹ್ಮ === ಪರಮ ಋಷಿಗಳ ಪರಂಪರೆ === ವಶಿಷ್ಠ ಮಹರ್ಷಿ ಶಕ್ತಿ ಮಹರ್ಷಿ ಪರಾಶರ ಮಹರ್ಷಿ ವೇದ ವ್ಯಾಸ ಶ್ರೀ ಶುಕ್ಲಾಚಾರ್ಯ ಶ್ರೀ ಗೌಡಪಾದ ಆಚಾರ್ಯ ಶ್ರೀ ಗೋವಿಂದ ಭಗವತ್ಪಾದ ಶ್ರೀ ಶಂಕರ ಭಗವತ್ಪಾದ (788-820) === ಪೀಠಾಧಿಪತಿಗಳ ಪಟ್ಟಿ ===